ಹಲವು ವರ್ಷಗಳ ನಂತರ ಕನ್ನಡ ವಿಕಿಮೀಡಿಯನ್ನರ ಸಮ್ಮಿಲನವನ್ನು *ಜನವರಿ ೨೨,೨೦೨೩ರಂದು
ಉಡುಪಿಯಲ್ಲಿ* ಆಯೋಜಿಸಲಾಗುತ್ತಿದೆ. ಈ ಸಮ್ಮಿಲನದಲ್ಲಿ ಕನ್ನಡದ ಯಾವುದೇ ವಿಕಿ ಯೋಜನೆಗಳಲ್ಲಿ
ಕೊಡುಗೆ ನೀಡುತ್ತಿರುವ ಎಲ್ಲ ಸಂಪಾದಕರಿಗೆ ಭಾಗವಹಿಸಲು ಮುಕ್ತ ಅವಕಾಶವಿದೆ. ಬಹಳ ಸಮಯದ ನಂತರ
ಎಲ್ಲರ ಭೇಟಿಯು ಒಂದು ಉಲ್ಲಾಸದಾಯಕ ಕಾರ್ಯಕ್ರಮವಾಗುವುದರ ಜೊತೆಗೆ ಕನ್ನಡ ವಿಕಿಸಮುದಾಯಕ್ಕೆ
ಮರುಚೈತನ್ಯ ತಂದುಕೊಡಬಹುದೆಂಬ ಆಶಾಭಾವನೆ ಇದರಲ್ಲಿ ಮುಖ್ಯವಾಗಿದೆ. ಹಳೆ ಹೊಸ
ವಿಕಿಮೀಡಿಯನ್ನರ ಸಮಾಗಮವು ಜ್ಞಾನದ ಹಂಚಿಕೆಗೆ, ಮಾಹಿತಿ ವಿನಿಮಯಕ್ಕೆ ಒಳ್ಳೆಯ ವೇದಿಕೆಯಾಗುವ
ವಿಶ್ವಾಸವಿದೆ. ಕನ್ನಡ ವಿಕಿಸಮುದಾಯದ ಎಲ್ಲಾ ಸಂಪಾದಕರು ಸ್ವಯಂಪ್ರೇರಣೆಯಿಂದ ಇದರಲ್ಲಿ
ಭಾಗವಹಿಸಿ ಯಶಸ್ವಿಗೊಳಿಸೋಣ.

ಕಾರ್ಯಕ್ರಮದ ವಿವರಗಳಿಗಾಗಿ ಮತ್ತು ನೊಂದಾಯಿಸಿಕೊಳ್ಳಲು* ವಿಕಿಪೀಡಿಯ:ಸಮ್ಮಿಲನ/ವಿಕಿ
ಸಮ್ಮಿಲನ ೨೦೨೩, ಉಡುಪಿ
<https://kn.wikipedia.org/wiki/%E0%B2%B5%E0%B2%BF%E0%B2%95%E0%B2%BF%E0%B2%AA%E0%B3%80%E0%B2%A1%E0%B2%BF%E0%B2%AF:%E0%B2%B8%E0%B2%AE%E0%B3%8D%E0%B2%AE%E0%B2%BF%E0%B2%B2%E0%B2%A8/%E0%B2%B5%E0%B2%BF%E0%B2%95%E0%B2%BF_%E0%B2%B8%E0%B2%AE%E0%B3%8D%E0%B2%AE%E0%B2%BF%E0%B2%B2%E0%B2%A8_%E0%B3%A8%E0%B3%A6%E0%B3%A8%E0%B3%A9,_%E0%B2%89%E0%B2%A1%E0%B3%81%E0%B2%AA%E0%B2%BF>
(*
https://kn.wikipedia.org/s/2yz3) ಪುಟಕ್ಕೆ ಭೇಟಿ ಕೊಡಿ.


*ಎಲ್ಲಾ ಕನ್ನಡ ವಿಕಿಮೀಡಿಯನ್ನರಿಗೆ ಪ್ರೀತಿಯ ಸ್ವಾಗತ.*
_______________________________________________
Wikikn-l mailing list -- [email protected]
To unsubscribe send an email to [email protected]

Reply via email to