ಮಾನ್ಯರೇ,
ನಾನು cell (biology) ಎನ್ನುವ ಇಂಗ್ಲೀಶ್ ವಿಕಿಪೀಡಿಯ ಲೇಖನವನ್ನು ಭಾಗಶ (ಅರ್ಥಕ್ಕೂ ಹೆಚ್ಚು) ಅನುವಾದಿಸಿದ್ದೇನೆ. ಅದಕ್ಕೆ ಬಳಸಿದ ಟೈಟಲ್ "ಜೀವಕೋಶ" ಎಂದು. ಆದರೆ ಜೀವಕೋಶ ಪದ "ಜೀವ ಕಣ"ಕ್ಕೆ ಲಿಂಕಾಗಿದ್ದು ಒಂದೆರಡು ಸಾಲುಗಳ ಬರಹ ಇದೆ. ವಾಸ್ತವದಲ್ಲಿ ಸೆಲ್ ಅನುವಾದ ಕೋಶ (ನವಕರ್ನಾಟಕ ವಿಜ್ಞಾನ ಪದ ಕೋಶ), ಜೀವಕೋಶ, ಜೀವಕಣ (ಮೈಸೂರು ಯುನಿವರ್ಸಿಟಿ ನಿಘಂಟು) ಎಂದಿವೆ. ವಿಕಿಪೀಡಿಯದಲ್ಲಿ ಸಸ್ಯ ಜೀವಕೋಶ ಹೆಸರಿನ ಲೇಖನವೂ ಇದೆ. ಹೀಗಾಗಿ ಜೀವಕೋಶ ಹೆಚ್ಚು ಸಂಗತ ಅನುವಾದ ಎಂದು ನನಗೆ ಅನ್ನಿಸಿದೆ. ಈಗ ನಾನು ಜೀವಕೋಶ ಪುಟದಲ್ಲಿ ನಾನು ಮಾಡಿದ ಅನುವಾದ ಹಾಕಬಹುದೇ?

ಪ್ರದೀಪ್ ಬೆಳಗಲ್

_______________________________________________
Wikikn-l mailing list
[email protected]
https://lists.wikimedia.org/mailman/listinfo/wikikn-l

Reply via email to