ನಮಸ್ತೆ,

ಪುಸ್ತಕ ಪ್ರಿಯರನ್ನು ಕನ್ನಡ ವಿಕಿಪೀಡಿಯ ಸಂಪಾದಕರನ್ನಾಗಿಸುವ ಯೋಜನೆಯೊಂದನ್ನು ಈ ಬಾರಿಯ
ಐ.ಇ.ಜಿ (ಇಂಡಿವಿಜುಅಲ್ ಎಂಗೇಜ್‌ಮೆಂಟ್ ಗ್ರಾಂಟ್)ಗೆ ಒಪ್ಪಿಸಿದ್ದೇನೆ. ಡಿಜಿಟಲ್ ಲೈಬ್ರರಿ
ಆಫ್ ಇಂಡಿಯಾ ಮತ್ತು ಒಸ್ಮಾನಿಯ ಡಿಜಿಟಲ್ ಲೈಬ್ರರಿಯಲ್ಲಿ ಲಭ್ಯವಿದ್ದ ೫೪೦೦ಕ್ಕೂ ಹೆಚ್ಚು
ಪುಸ್ತಕಗಳ ಮಾಹಿತಿಯನ್ನು (ಮೆಟಡೇಟಾ) ಸಂಚಯದ ನಮ್ಮ ತಂಡ ಸಮೂಹ ಸಂಚಯ
<http://samooha.sanchaya.net/> ಸಮುದಾಯ ಸಹಭಾಗಿತ್ವ ವೇದಿಕೆ ಅಡಿಯಲ್ಲಿ
ಕನ್ನಡೀಕರಿಸಿ, ಅವುಗಳನ್ನು ಪರಿಶೀಲಿಸುವ ಕಾರ್ಯವನ್ನೂ ಈಗಾಗಲೇ ಮುಗಿಸಿದ್ದು ಬಹಳಷ್ಟು
ಮಂದಿಗೆ ಗೊತ್ತಿರುವ ವಿಷಯವಾಗಿದೆ. ಈ ಎಲ್ಲಾ ಪುಸ್ತಕಗಳನ್ನು ನಮ್ಮ ಪುಸ್ತಕ ಸಂಚಯದಲ್ಲಿ
<http://pustaka.sanchaya.net/> ಸುಲಭವಾಗಿ ಹುಡುಕುವಂತೆಯೂ ಮಾಡಿದ್ದೇವೆ. ಈ
ಪುಸ್ತಕಗಳನ್ನು ವ್ಯವಸ್ಥಿತವಾಗಿ, ಸೂಕ್ತ ಪರಿಚಯ, ಉಲ್ಲೇಖಗಳೊಂದಿಗೆ ಕನ್ನಡ ವಿಕಿಪೀಡಿಯಕ್ಕೆ
ಸೇರಿಸುವ ಕೆಲಸವಾಗಬೇಕಿದೆ. ಇದಕ್ಕೆ ಅವಶ್ಯವಿರುವ ಮೂಲ ಸೌಕರ್ಯವನ್ನು ಅಭಿವೃದ್ಧಿಗೊಳಿಸುವ
ಕೆಲಸವನ್ನು ನಮ್ಮ ತಂಡ ಮಾಡಲಿದೆ. ಇದರಿಂದ ಪುಸ್ತಕ ಪ್ರಿಯರು ಡಿಜಿಟಲ್ ಲೈಬ್ರರಿಗಳ
ಪುಸ್ತಕಗಳನ್ನು ಹುಡುಕುವುದು ವಿಕಿಪೀಡಿಯದಿಂದ ಮತ್ತಷ್ಟು ಸುಲಭವಾಗಲಿದೆ ಅಷ್ಟೇ ಅಲ್ಲದೆ,
ಅವರನ್ನು ವಿಕಿ ಸಂಪಾದಕರನ್ನಾಗಿ ಮಾಡುವ ಅವಕಾಶ ಕೂಡ ಒದಗಿ ಬರುತ್ತದೆ. ಇಲ್ಲಿ ಸಮುದಾಯ
ಸಹಭಾಗಿತ್ವದ ಜೊತೆಗೆ ವಿಷಯಾಧಾರಿತ ವಿಕಿ ಸಂಪಾದನೆಯನ್ನು ಹೇಗೆ ಜೊತೆಯಾಗಿ ಕೊಂಡೊಯ್ಯಬಹುದು
ಎನ್ನುವ ಅಧ್ಯಯನಕ್ಕೂ ಈ ಯೋಜನೆ ಸಹಕಾರಿ ಆಗಲಿದೆ. ಸವಿವರವಾದ ನಮ್ಮ ಯೋಜನೆಯ
ಪ್ರಸ್ತಾವನೆಯನ್ನು ಕನ್ನಡ ವಿಕಿ ಸಮುದಾಯ Grants:IEG/Growing Kannada-language
Wikimedia projects with a digital library
<https://meta.wikimedia.org/wiki/Grants:IEG/Growing_Kannada-language_Wikimedia_projects_with_a_digital_library>
ಇಲ್ಲಿ
ಓದಬಹುದಾಗಿದ್ದು, ತಮ್ಮ ಬೆಂಬಲವನ್ನು ಸೂಚಿಸಬೇಕೆಂದು ಈ ಮೂಲಕ ಕೇಳಿಕೊಳ್ಳುತ್ತೇನೆ.

ಧನ್ಯವಾದಗಳೊಂದಿಗೆ

~ಓಂಶಿವಪ್ರಕಾಶ್/Omshivaprakash
<https://kn.wikipedia.org/wiki/%E0%B2%B8%E0%B2%A6%E0%B2%B8%E0%B3%8D%E0%B2%AF:Omshivaprakash>
/ಚರ್ಚೆ
<https://kn.wikipedia.org/wiki/%E0%B2%B8%E0%B2%A6%E0%B2%B8%E0%B3%8D%E0%B2%AF%E0%B2%B0_%E0%B2%9A%E0%B2%B0%E0%B3%8D%E0%B2%9A%E0%B3%86%E0%B2%AA%E0%B3%81%E0%B2%9F:Omshivaprakash>
/ಕಾಣಿಕೆಗಳು
<https://kn.wikipedia.org/wiki/%E0%B2%B5%E0%B2%BF%E0%B2%B6%E0%B3%87%E0%B2%B7:Contributions/Omshivaprakash>

-- 
--
With Best Regards,
Omshivaprakash.H.L | ಓಂ ಶಿವಪ್ರಕಾಶ್ ಎಚ್. ಎಲ್ | ॐ शिवप्रकाश् एच्. एल्

http://platonic.techfiz.info
http://blog.shivu.in
Phone: 91- 9902026518

linuxaayana.net | kindarajogi.com | sanchaya.net
_______________________________________________
Wikikn-l mailing list
[email protected]
https://lists.wikimedia.org/mailman/listinfo/wikikn-l

Reply via email to