ಕನ್ನಡ ವಿಕಿಪೀಡಿಯನ್ನರುಗಳಿಗೆ ನಮಸ್ಕಾರಗಳು,

 

ಕನ್ನಡ ವಿಕಿಪೀಡಿಯಕ್ಕೆ ಹತ್ತು ವರ್ಷಗಳು ತುಂಬಿದ ಸಂದರ್ಭದಲ್ಲಿ ಇದನ್ನು ಅರ್ಥಪೂರ್ಣವಾಗಿ 
ಆಚರಿಸೋಣ. ಇದು ಒಂದು ದಿನದ ಆಚರಣೆ ಆಗಬಾರದು. ಇಡೀ ವರ್ಷದ್ದು ಆಗಬೇಕು. ಮುಖ್ಯವಾಗಿ ನಮಗೆ 
ಆಗಬೇಕಾಗಿರುವುದು-

·         ಕನ್ನಡ ವಿಕಿಪೀಡಿಯದಲ್ಲಿ ಲೇಖನಗಳ ಸಂಖ್ಯೆ ಜಾಸ್ತಿ ಆಗಬೇಕು

·         ಕನ್ನಡ ವಿಕಿಪೀಡಿಯದಲ್ಲಿರುವ ಲೇಖನಗಳ ಗುಣಮಟ್ಟ ಸುಧಾರಿಸಬೇಕು

·         ಕನ್ನಡ ವಿಕಿಪೀಡಿಯದಲ್ಲಿರುವ ಜೊಳ್ಳು ನಿವಾರಣೆ ಆಗಬೇಕು

·         ಸಂಪಾದಕರ ಸಂಖ್ಯೆ ಜಾಸ್ತಿ ಆಗಬೇಕು

·         ಸಕ್ರಿಯ ಸಂಪಾದಕರ ಸಂಖ್ಯೆ ಜಾಸ್ತಿ ಆಗಬೇಕು

 

ಇವುಗಳನ್ನು ಹೇಗೆ ಸಾಧಿಸಬೇಕು ಎಂಬ ಬಗ್ಗೆ ಚರ್ಚಿಸೋಣ.

 

ಕನ್ನಡ ವಿಕಿಪೀಡಿಯದ ದಶಮಾನೋತ್ಸವ ಕಾರ್ಯಕ್ರಮ ಹೇಗಿರಬೇಕು ಎಂದು ಚರ್ಚಿಸಲು ನಾವೆಲ್ಲ ಸೇರೋಣ. 
ಮುಂದಿನ ಭಾನುವಾರ ಇಡೀ ದಿನ ಸುಚಿತ್ರದಲ್ಲಿ ಕನ್ನಡ ಬ್ಲಾಗರುಗಳಿಗೆ ವಿಕಿಪೀಡಿಯ ತರಬೇತಿ 
ಕಾರ್ಯಾಗಾರ ಇದೆ. ಅದು ಸಾಯಂಕಾಲ ೫:೩೦ಕ್ಕೆ ಮುಗಿಯುತ್ತದೆ. ನಂತರ ನಾವೆಲ್ಲ ಈ ದಶಮಾನೋತ್ಸವ ಹೇಗೆ 
ಆಚರಿಸುವುದು ಎಂಬ ಬಗ್ಗೆ ಚರ್ಚಿಸೋಣ. ದಯವಿಟ್ಟು ಎಲ್ಲರೂ ಬನ್ನಿ.

 

ಅಭಿಪ್ರಾಯಗಳನ್ನು ಇಲ್ಲೂ ದಾಖಲಿಸಬಹುದು.

 

ಸಿಗೋಣ,

ಪವನಜ

[email protected]

[email protected] 

+91.9902633113

 

_______________________________________________
Wikikn-l mailing list
[email protected]
https://lists.wikimedia.org/mailman/listinfo/wikikn-l

Reply via email to