ತುಂಬಾ ಮಾರ್ಮಿಕವಾಗಿದೆ On Sun, Nov 3, 2019, 12:17 PM nanda pur <[email protected]> wrote:
> *ಪಾಪ ವಿಮೋಚನಾ ಯೋಜನೆ*" > > ಆ ಊರಲ್ಲೊಂದು ಬಾವಿ, ಬಾವಿಯ ನೀರು ಕುಡಿದವನು ಕೆಟ್ಟವನು ಒಳ್ಳೆಯ > ಮನುಷ್ಯನಾಗುತ್ತಿದ್ದ,ಮೋಸ ಮಾಡಿದ್ದರು ಮನುಷ್ಯನಾಗುತ್ತಿದ್ದ, ಬಾವಿ ನೀರು ಸಿಕ್ಕವನಿಗೆ ರೋಗ > ರುಜಿನಗಳು ಸುಳಿಯುತ್ತಿರಲಿಲ್ಲ,ಅಲ್ಲಿಯ ನೀರು ಕುಡಿದರೆ ಅಕ್ಷರ ಅರಿಯದವನು ಪುಸ್ತಕ ಓದಲು > ಕಲಿಯುತ್ತಿದ್ದ,ಹತ್ತು ಕೊಲೆ ಮಾಡಿದವನು ಕೂಡ ಬಾವಿಯ ನೀರು ಬಾಯಿಗೆ ಬಿದ್ದರೆ ಅವನು > ಮಾಡಿದ ಅಪರಾಧಗಳನ್ನು ಜನ್ರು ಮರೆತು ಬಿಡುತ್ತಿದ್ದರು. ಆ ಊರಿನ ಬಾವಿಗೆ ದೈವಶಕ್ತಿ ಇದೆ > ಎಂದು ತರ್ಲೆ ತಿಮ್ಮ ಗುಲ್ಲೆಬ್ಬಿಸಿದ್ದ. ಆ ಊರಿನ ವಾರಸುದಾರ "ತರ್ಲೆ ತಿಮ್ಮ"ನಿಗೆ ಬಾವಿ > ನೀರು ಹನಿ ಹನಿಯಾಗಿ ಹಂಚಲು "ಬುಲ್ಡಿ ಈರ" ಅಪ್ಪಣೆ ಕೊಡಿಸಿದ್ದ. > ಇದಕ್ಕಾಗಿ "ಪಾಪ ವಿಮೋಚನಾ ಯೋಜನೆ" ಜಾರಿಗೆ ತರಲು ಹೇಳಿದ್ದ ಬಾವಿ ನೀರು ಸಿಕ್ಕವರಿಗೆ > ಮಾತ್ರ ಪಾಪ ವಿಮೋಚನಾ ಪತ್ರ ನೀಡಿ ಗೌರವಿಸುತ್ತಿದ್ದ. > ಬಾವಿ ನೀರು ಕುಡಿದು ಪ್ರಮಾಣ ಪತ್ರ ಪಡೆಯಲು ಸುತ್ತ ಹತ್ತೂರಿನಿಂದ ಜನ ಗಾಡಿಯಲ್ಲಿ > ಬರುತ್ತಿತ್ತು. ನೀರು ಕುಡಿದವರು ಲಕ್ಷ ಲಕ್ಷ ಫೀಜು ತಿಮ್ಮನಿಗೆ ಒಪ್ಪಿಸಿ ಪಾಪ ವಿಮೋಚನಾ > ಪತ್ರ ಪಡೆದು ಪುನೀತರಾಗುತ್ತಿದ್ದರು,ಪ್ರೇಮು ತೊಡಿಸಿದ ಪತ್ರ ಮನೆಯಲ್ಲಿ ನೇತು ಹಾಕಿದರೆ > ಅವರಿಗೆ ಯಾವುದೆ ಕೆಡುಗಾಲವಿರುತ್ತಿರಲಿಲ್ಲ,ಅವರ ವಿರುದ್ಧ ಯಾವುದೇ ಮಾಟ ಮಂತ್ರ ಕೆಲಸ > ಮಾಡುತ್ತಿರಲಿಲ್ಲ. > ಬಾವಿಯ ನೀರು ಕುಡಿದು ಪ್ರಮಾಣ ಪತ್ರ ಪಡೆದವನು ಚುನಾವಣೆಗೆ ನಿಂತರೆ ಗೆಲವು ಗ್ಯಾರಂಟಿ ಎಂಬ > ನಂಬಿಕೆ ಇತ್ತು,ಹೀಗಾಗಿ ಪುಡಿ ಲೀಡ್ರುಗಳು ತಿಮ್ಮನ ಉಸ್ತುವಾರಿಯಲ್ಲಿರುವ ಬಾವಿ ನೀರು > ಕುಡಿಯಲು ನಾ ಮುಂದು ತಾ ಮುಂದು ಎಂದು ಪೈಪೋಟಿಗೆ ನಿಂತಿದ್ದರು. ದೊಡ್ಡ ದೊಡ್ಡ ಸಾಲುಗಳು > ಪ್ರಮಾಣ ಪತ್ರಕ್ಕೆ ಪಾಳಿ ಹಚ್ಚಿದ್ದವು,ಕೆಲವರಿಗಾಗಿ ವಿಶೇಷ ಸಾಲುಗಳಿದ್ದವು ಆದರೆ ಸಾಲಿಗೆ > ನಿಂತವರೆಲ್ಲ ಪ್ರಮಾಣ ಪತ್ರ ಸಿಗುತ್ತಿರಲಿಲ್ಲ ಬಾವಿ ನೀರು ಸಿಕ್ಕವರಿಗೆ ಮಾತ್ರ ತರ್ಲೆ > ತಿಮ್ಮನಿಂದ ಪಾಪ ವಿಮೋಚನಾ ಪತ್ರ ಸಿಗುತ್ತಿತ್ತು,ಆ ಊರಿನ ಗಣ್ಯಾತಿ ಗಣ್ಯರ ಮನೆಯಲ್ಲಿ ತರ್ಲೆ > ತಿಮ್ಮನ ಭಾವ ಚಿತ್ರ ವಿರುವ ಪಾಪ ವಿಮೋಚನಾ ಪತ್ರ ಗೋಡೆಯ ಮೇಲೆ ನೇತಾಡುತ್ತಿತ್ತು, ಈ ಪ್ರಮಾಣ > ಪತ್ರ ವಿರುವ ಮನೆ ಎಷ್ಟೆ ಪಾಪ ಕಾರ್ಯ ಮಾಡಿದ್ದರು ತರ್ಲೆ ತಿಮ್ಮ ನೀಡಿದ ನೀರಿನ ಪ್ರಭಾವದಿಂದ > ಉಶ್ಯಾಪವಾಗುತ್ತಿತ್ತು ಇಂತಹ ದಿವ್ಯ ಪ್ರಶಸ್ತಿಯನ್ನು ದಯಪಾಲಿಸಿ ತರ್ಲೆ ತಿಮ್ಮ ಊರಿಗೆ > ಮಹಾನ್ ವ್ಯಕ್ತಿಯಾಗಿದ್ದ. > > ಈ ಪ್ರಮಾಣ ಪತ್ರ ಪಡೆಯುವದಕ್ಕಾಗಿ ರಾಜಕಾರಣಿಗಳು,ಸಿರಿವಂತರು,ಕೆಲವು ಹೋರಾಟಗಾರರು ತಿಮ್ಮನ > ದುಂಬಾಲು ಬಿದ್ದಿದ್ದರು ತಿಮ್ಮನ ಬಾವಿನೀರು ಕುಡಿಯುವ ತವಕವಿದ್ದವನು ಅತಿ ಹೆಚ್ಚು ಭೂಮಿ > ನುಂಗಿದ್ದರೆ, ಅಕ್ರಮ ಹಣ ಗಳಿಸಿದ್ದರೆ,ಕೆರೆಗೆ ಕೆರೆಯನ್ನೇ ತಮ್ಮ ಹೊಲದ ಕಡೆ ಟ್ರಾನ್ಸಫರ್ > ಮಾಡಿಕೊಂಡಿದ್ದರೆ, ತುಳಿದು ಬೆಳದಿದ್ದರೆ ಅವುಗಳನ್ನೆಲ್ಲ ಪ್ರಾಮಾಣಿಕವಾಗಿ ಬರೆದು ಒಂದು > ಪ್ರಸ್ತಾವನೆಯನ್ನು ಸಿದ್ದಪಡಿಸಿ ಅಗತ್ಯ ವಿದ್ದರೆ ಪೋಟೋ ಲಗತ್ತಿಸಿ ತರ್ಲೆ ತಿಮ್ಮನಿಗೆ > ಸಲ್ಲಿಸಿದರೆ ಅವನು ಯೋಜನೆಯ ಫಲಾನುಭವಿಯನ್ನು ಆಯ್ಕೆ ಮಾಡಿ ತನ್ನ ಬಾವಿ ನೀರು ಕುಡಿಸಿ > ಪ್ರಮಾಣ ಪತ್ರ ನೀಡಿ ಗೌರವಿಸುತ್ತಿದ್ದ,ಇದರಿಂದ ಅವನ ಪಾಪ ವಿಮೋಚನೆಯಾಗಿ ಭೂಮಿ > ನುಂಗಿದವನು,ಕೆರೆ ಕಟ್ಟೆಗಳನ್ನು ಸಾಪು ಮಾಡಿದವನು ಸೇಫ್ ಆಗಿ ಬಿಡುತ್ತಿದ್ದ, ರೈತರ ಸಾಲ > ಮನ್ನಾ ಮಾಡಿದಂತೆ ತಿಮ್ಮನ ಯೋಜನೆಯಿಂದ ಎಲ್ಲ ಪಾಪಗಳು ಉಶ್ಯಾಪವಾಗಿ ಬಿಡುತ್ತಿತ್ತು ಹೀಗಾಗಿ > ತಪ್ಪು ಮಾಡಿದವರೆಲ್ಲ ತಿಮ್ಮನ ಮನೆಗೆ ಬಂದು ಅವನ ಕಾಲಿಗೆ ಬಿದ್ದು ನೀರು ಕೇಳಿ ಪಾಪ ವಿಮೋಚನಾ > ಪತ್ರ ಪಡೆಯುತ್ತಿದ್ದರು, ಇದಕ್ಕಾಗಿ ತಗುಲುವ ವೆಚ್ಚವನ್ನು ತುಂಬಿ ತಾವು ಮಾಡಿದ ಪಾಪ > ಕಾರ್ಯಗಳಲ್ಲಿ ತಿಮ್ಮನಿಗೆ ಪಾಲು ನೀಡಿ ಪಾವನವಾಗುತ್ತಿದ್ದರು. > ಉದ್ದಿಮೆಗಳು,ಕಳಪೆ ಕಾಮಗಾರಿಗಳ ಕಾಂಟ್ರಾಕ್ಟರ್ ಗಳು,ವ್ಯಾಪಾರಿಗಳು,ರಿಯಲ್ ಮಾಲಿಕರು ಬಾವಿ > ನೀರು ಕುಡಿದು ಪಾಪ ವಿಮೋಚನಾ ಯೋಜನೆಯ ಫಲಾನುಭವಿಯಾಗಲು ತಳ್ಳಾಟ ನಡೆಸಿದ್ದರು,ಊರಲ್ಲಿ ಕಾಲರಾ > ಬೇನೆ ಬಂದು ಮಕ್ಕಳು ಮರಿಗಳು ಸಾಯುತ್ತಿದ್ದರು,ಅನ್ನವಿಲ್ಲದೆ ಜನ ಕಂಗಾಲಾಗಿದ್ದರು,ಬಿರುಗಾಳಿ > ಬಂದು ಮನೆ ಮಠಗಳು ಉರುಳಿದವು,ನೆರೆಹಾವಳಿ ಬಂದು ಜನ ನೆಲೆ ಕಳೆದು ಕೊಂಡಿದ್ದರು ಊರಲ್ಲಿ > ಕುಡಿಯುವ ನೀರಿಲ್ಲ,ದುಡಿಯುವ ಕೈಗಳಿಗೆ ಕೆಲಸವಿಲ್ಲ,ಉದ್ಯೋಗವಿಲ್ಲದೆ ಜನ ಊರು ಬಿಡುತ್ತಿದ್ದ > ವೇಳೆಯಲ್ಲಿ ತಿಮ್ಮ ಮಾರೆಮ್ಮನ ಉತ್ಸವ ಮಾಡಿ ಊರು ಉದ್ದರಿಸಬೇಕೆಂದು ಮನೆಯಿಂದ ಮಾರೆಮ್ಮನ > ಗುಡಿಯವರೆಗೆ ದೀಡು ನಮಸ್ಕಾರ ಹಾಕಿ ಸಾಮು ತೆಗೆದಿದ್ದ, ಅಂದು ಮಾರೆಮ್ಮನ ಪೂಜಾರಿ "ಬುಲ್ಡಿ > ಈರನಿಗೆ" ದೇವಿ ಮೈತುಂಬಿ ಬಂದು ಮೈಗೆ ಬೇವಿನ ತಪ್ಪಲು ಸುತ್ತಿ ಕೆದರಿದ ಕೂದಲು ಬಿಟ್ಟು > ಕೈಯಲ್ಲಿ ಅಲಗು ಹಿಡಿದು ಊರು ತುಂಬ ಓಡಾಡಿದ್ದ,ಬುಲ್ಡಿ ಈರನಿಗೆ ವರ್ಷಕ್ಕೊಮ್ಮೆ ಮಾರೆಮ್ಮ > ಮೈತುಂಬಿ ಬರುತ್ತಿದ್ದಳು, ಹೀಗೆ ಬಂದಾಗ ಸುಮಂಗಲೆಯರೆಲ್ಲ ಪೂರ್ಣ ಕುಂಬ ದೊಂದಿಗೆ ಮಾರೆಮ್ಮನ > ಗುಡಿಯ ಮುಂದೆ ಸೇರುತ್ತಿದ್ದರು,ರಾಜಕಾರಣಿಗಳು,ಗಣ್ಯರೆಲ್ಲರೂ ಬುಲ್ಡಿ ಈರನ ಹೇಳಿಕೆಯನ್ನು > ಕಿವಿ ನಿಗರಿಸಿ ಕೇಳುತ್ತಿದ್ದರು ವರ್ಷಕ್ಕೊಮ್ಮೆ ಈ ಪೂಜಾರಿಯ ಹೇಳಿಕೆ ನೆರೆದ ಜನರಲ್ಲಿ > ದೈವದ ಬಗ್ಗೆ ಜಾಗೃತಿ ಮೂಡಿಸುತ್ತಿತ್ತು "ಊರಲ್ಲಿ ಪಾಪ ತುಂಬಿದೆ ಮೋಸ ವಂಚನೆ ಹೆಚ್ಚಾಗಿದೆ" > ಇದರ ವಿಮೋಚನೆಗಾಗಿ ತಿಮ್ಮನ ಬಾವಿ ನೀರು ಕುಡಿದು ಪವಿತ್ರವಾಗಬೇಕೆಂದು ಮೂರ್ಛೆ ಹೋದ. > ಈರನ ಹೇಳಿಕೆಯಿಂದ ಗಾಬರಿಗೊಂಡ ಜನ ಊರಿಗೆ ಊರೆ ತಿಮ್ಮನ ಮನೆಗೆ ಓಡಿತು ವಿಷಯವೆಲ್ಲ > ತರ್ಲೆಗೆ ನಿವೇದಿಸಿದರು,ಒಳಗೊಳಗೆ ಉಬ್ಬಿ ಹೋದ ತರ್ಲೆ ಬಾವಿ ನೀರು ಕುಡಿಯಲು ಕೆಲವು > ಕರಾರುಗಳಿವೆ ಎಂದು ತಕರಾರು ತೆಗೆದ,ಈ ನೀರು ಎಲ್ಲರಿಗೂ ಸುಲಭವಾಗಿ ಸಿಗುವಂತದ್ದಲ್ಲ ಎಂದು > ಹೇಳಿ "ಪಾಪ ವಿಮೋಚನಾ ಟ್ರಸ್ಟ್" ಪ್ರಾರಂಭಿಸಿದ ಜನರಿಂದ ದೇಣಿಗೆ ವಸೂಲಿ ಮಾಡಿದ ಪಾಪ > ಪರಿಹಾರಕ್ಕಾಗಿ ಜನ ತಿಮ್ಮನ ಬಾಗಿಲಲ್ಲಿ ಮೂರು ಮೂರು ದಿನ ಕಾಯುತ್ತಿದ್ದರು, > ತಿಮ್ಮ ಪಂಚಾಯ್ತಿ ಪ್ರೆಸಿಡೆಂಟಾಗಿ ಊರನ್ನು ಆಳುತ್ತಿದ್ದ,ಅರಸು ಮಕ್ಕಳಿಗೆ ಸಿಗದ ಕುದುರೆ > ನನಗೆ ಸಿಕ್ಕಿದೆ ನನ್ನಿ ಕುದುರೆ ಎಂದು ಬೀಗುತ್ತಿದ್ದ,ಅನೇಕ ಯೋಜನೆಗಳನ್ನು ಜಾರಿಗೆ ತಂದು > ಫಲಾನುಭವಿಗಳ ಹೆಸರಲ್ಲಿ ಬಿಲ್ ಎತ್ತಿ ಸಫಲನಾಗಿದ್ದ, ಆ ಊರಿನ ಹೆಣ್ಣು ಲೀಡ್ರ್ರು ತರ್ಲೆ > ಸುಬ್ಬಿ ಅನಾಥ ಮಕ್ಕಳ ಅನ್ನ ಕದ್ದಿದ್ದಳು ಮಕ್ಕಳ ದವಸ ಧಾನ್ಯ ಮಿಲ್ಲಿಗೆ ಮಾರಿ ತಿಮ್ಮನಿಂದ > ಸೈ ಎನಿಸಿಕೊಂಡಿದ್ದಳು,ಸುಬ್ಭಿಯ ಸಾಹಸ ಕಾರ್ಯವನ್ನು ಮೆಚ್ಚಿ ತಾನು ಒಂದಿಷ್ಟು ಸುಬ್ಬಿಯ > ಪಾಲಿನಲ್ಲಿ ಪಾಟ್ನರ್ ಆದ ತನ್ನ ಬಾವಿ ನೀರು ಸುಬ್ಬಿಗೆ ಕುಡಿಸಿ "ಪಾಪ ವಿಮೋಚನಾ ಪತ್ರ" ನೀಡಿ > "ತರ್ಲೆ ರಾಣಿ" ಎಂದು ಘೋಷಿಸಿದ. ಪ್ರತಿ ವರ್ಷ ಪಾಪ ವಿಮೋಚನೆ ಪತ್ರ ರಿನಿವಲ್ > ಮಾಡಿಸಿಕೊಳ್ಳಲು ತಿಳಿಸಿದ > ತರ್ಲೆ ತಿಮ್ಮನ ಕುಲ ಗುರು ಬುಲ್ಡಿ ಈರ ತಿಮ್ಮನ ಪಾಲಿಗೆ ದೇವದೂತ,ಅವನು ಹೇಳಿದಂತೆ ಊರನ್ನು > ಆಳುವ ಅರಸ ,ಕುಲ ಗುರುವಿನ ಮಾತಿನಂತೆ ಪಾಪ ವಿಮೋಚನಾ ಯೋಜನೆ ಜಾರಿಗೆ ತಂದಿದ್ದು, ಈ ಯೋಜನೆಯ > ಪ್ರಯೋಜನ ಪಡೆದವರು ಖದೀಮರು,ಕಳ್ಳರು,ರಿಯಲ್ ಮಾಲೀಕರೆ ಹೆಚ್ಚಾಗಿದ್ದರು ಇವರೆಲ್ಲ ಬುಲ್ಡಿ > ಈರನ ಪರಮ ಭಕ್ತರಾಗಿರುವದರಿಂದ ತಿಮ್ಮನ ಪಾಪ ವಿಮೋಚನಾ ಟ್ರಸ್ಟಿಗೆ ಕೋಟಿ ಕೋಟಿ ದುಡ್ಡು > ಕೊಟ್ಟು ಪ್ರಮಾಣ ಪತ್ರ ಪಡೆಯುತ್ತಿದ್ದರು. > ಮೊದ್ಲೆಲ್ಲ ಬುಲ್ಡಿ ಈರ ತರ್ಲೆ ತಿಮ್ಮನಿಗೆ ಮಟ್ಕಾ ನಂಬ > ರ್ ಹೇಳಿಕೊಡುವ ಬಾಬಾ ಮಾರೆಮ್ಮನ ಪೂಜಾರಿಯಾಗಿದ್ದ, ತಿಮ್ಮ ಮಟ್ಕಾ ದಂದೆಯಲ್ಲಿ ತೊಡಗಿ > ಹಾಳಾಗಿ ಹೋಗಿದ್ದ ಇಬ್ಬರು ಪೋಲಿಸರ ಅತಿಥಿಯಾಗಿ ಜೈಲು ಪಾಲಾಗಿದ್ದರು,ಜೈಲಲ್ಲಿ ಬುಲ್ಡಿ > ಈರನಿಗೆ ಮೈ ತುಂಬಿ ಬಂದು ಯದ್ವಾ ತದ್ವಾ ಕೂಗಾಡಿ ಪೋಲೀಸರಿಗೆ ಶಾಪ ಹಾಕಿದ್ದ ಇವನ ಕೋಪಕ್ಕೆ > ಹೆದರಿ ಇಬ್ಬರನ್ನು ಬಿಡುಗಡೆ ಮಾಡಿ ಶಾಪ ದಿಂದ ತಪ್ಪಿಸಿ ಕೊಂಡಿದ್ದರು. > ಬುಲ್ಡಿಯ ಹೇಳಿಕೆಯಂತೆ ತಿಮ್ಮ ಮನೆ ಹಿಂದೆ ಬಾವಿ ತೋಡಿಸಿ ಕಂಗಾಲಾದ, ಬಾವಿಯಲ್ಲಿ ಕೊಡ > ನೀರು ತುಂಬುತ್ತಿರಲಿಲ್ಲ ಇನ್ನೇನು ಊರು ಬಿಡಬೇಕೆಂದಿದ್ದ ಮೀಸಲಿನ ಮೋಸದಾಟದಲ್ಲಿ ತಿಮ್ಮನಿಗೆ > ಪಂಚಾಯ್ತಿ ಛಾನ್ಸು ಸಿಕ್ಕು ಪ್ರೆಸಿಡೆಂಟಾಗಿ ಬೆಳೆದ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡ > ಈರನ ಉಪದೇಶದಂತೆ "ಪಾಪ ವಿಮೋಚನಾ ಟ್ರಸ್ಟ್" ಸ್ಥಾಪಿಸಿದ. ಬಾವಿ ನೀರು ಖರ್ಚು ಮಾಡಲು ಈರನ > ಕಾಲಿಗೆ ಬಿದ್ದು ಊರು ಜನರಿಗೆ ನೀರು ಕುಡಿಸಿದ ತಿಮ್ಮನ ಬಾವಿ ನೀರು ಕುಡಿದರೆ ಪಾಪ > ನಿವಾರಣೆಯಾಗುತ್ತದೆ ಎಂದು ಮಾರೆಮ್ಮನ ಪೂಜಾರಿ ಬುಲ್ಡಿ ಈರನ ಬಾಯಿಂದ ಹೇಳಿಸಿದ. > ಇದರಿಂದ ಪಾಪಿಗಳು ಬಾವಿನೀರು ಕುಡಿಯಲು ಕಂತೆ ಕಂತೆ ದುಡ್ಡು ಕೊಟ್ಟರು "ಈರ, ತರ್ಲೆ" > ಪಾಪಿಗಳ ದುಡ್ಡಲ್ಲಿ ಪಾಟ್ನರ್ ಆದರು ಗಣ್ಯಾತಿ ಗಣ್ಯರಿಗೆ ನೀರು ಕುಡಿಸಿ ಶ್ರೀಮಂತರಾದರು. > ಈಗ ಊರಲ್ಲಿ ಪಾಪ ವಿಮೋಚನಾ ಪ್ರಮಾಣ ಪತ್ರ ಪಡೆದವರಿಗೆ ಕೋರ್ಟಿಂದ ವಾರೆಂಟ ಬಂದಿದೆ, ತಿಮ್ಮನ > ವೈರಿ ಗುಂಪಿನ ಅನುಯಾಯಿಗಳು ಲೋಕಾಯುಕ್ತರಿಗೆ ದೂರು ನೀಡಿ ಪಾಪ ವಿಮೋಚನೆ ನೆಪದಲ್ಲಿ ತಮ್ಮ > ತಪ್ಪುಗಳನ್ನು ಪ್ರಾಮಾಣಿಕವಾಗಿ ಒಪ್ಪಿಸಿ ಕೊಂಡಿದ್ದಾರೆಂದು ಕೇಸು ದಾಖಲಿಸಿದ್ದರು. > ಈ ನಡುವೆ ಬುಲ್ಡಿ ಈರ ತರ್ಲೆ ತಿಮ್ಮನಿಗಾಗಿ ಪೋಲೀಸರು ಹುಡುಕಾಟ ನಡೆಸಿದ್ದರು,ತಿಮ್ಮ ಹಂಚುವ > ನೀರಿನಿಂದ ಊರಲ್ಲಿ ಕಾಲರಾ ಬೇನೆ ತಗುಲಿದೆ ಎಂದು ದೂರು ನೀಡಿದ್ದರು. > ಈರ ತಿಮ್ಮನ ಸುಳಿವು ಊರವರಿಗೆ ತಿಳಿದಿದೆ,ಆದರೆ ನೀರಿನ ಋಣ ತೀರಿಸುವುದಕ್ಕಾಗಿ > ತೆಪ್ಪಗಿದ್ದಾರೆ. > > *(ಅಜಮೀರ ನಂದಾಪುರ*.) > ಗಂಗಾವತಿ,9449705672. > > -- > ----------- > 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. > - > https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform > 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. > - > http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ > 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ > ನೀಡಿ - > http://karnatakaeducation.org.in/KOER/en/index.php/Portal:ICT_Literacy > 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ > ತಿಳಿಯಲು - > http://karnatakaeducation.org.in/KOER/en/index.php/Public_Software > ----------- > --- > You received this message because you are subscribed to the Google Groups > "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. > To unsubscribe from this group and stop receiving emails from it, send an > email to [email protected]. > To view this discussion on the web, visit > https://groups.google.com/d/msgid/kannadastf/CAPHu_VYJftH_PKVzxKmzUYV7OGBg69F7kOPFARk-rtd2tZH7Cg%40mail.gmail.com > <https://groups.google.com/d/msgid/kannadastf/CAPHu_VYJftH_PKVzxKmzUYV7OGBg69F7kOPFARk-rtd2tZH7Cg%40mail.gmail.com?utm_medium=email&utm_source=footer> > . > -- ----------- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ - http://karnatakaeducation.org.in/KOER/en/index.php/Portal:ICT_Literacy 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software ----------- --- You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. To unsubscribe from this group and stop receiving emails from it, send an email to [email protected]. To view this discussion on the web, visit https://groups.google.com/d/msgid/kannadastf/CAGaC9cJA9goc6J-zyypHafAw9K99YdSs%2BGyJzjTmOcLixPMZDA%40mail.gmail.com.
