*ಆದಿಕವಿ* ಗುರಿಯಿರದೇ ಅಲೆದಲೆದು ಉದರ ಪೋಷಣೆಗಾಗಿ ದರೋಡೆ ಮಾಡಿದವನು
ನಾರದರ ಆಣತಿಯಿಂ ದಾರಿಯನು ಅರಿತು ವಿರಾಗಿಯಾದವನು "ಮರ ಮರ" ಎನುತ ವಿರಾಮವಿಲ್ಲದೆ ಪಠಿಸಿ ರಾಮನನು ಕಂಡವನು ಹುತ್ತವದು ಆವರಿಸೆ ಕತ್ತಲೆಯ ಬೆತ್ತಲಾಗಿಸಿ ಸುತ್ತಲೂ ಬೆಳಕಾದವನು ತಮಸಾ ನದಿ ತಟದಿ ನಿಶ್ಚಿಂತ ಸಾಗುತ್ತಿರೆ ಕ್ರೌಂಚಮಿಥುನದ ವಧೆಯನು ಕಣ್ಣಾರೆ ಕಂಡು ಅತಿ ನೋವನುಂಡು ಸಂಕಟದಿ ಮುಳುಗಿದವನು ಒಡಲಿನ ಶೋಕವು ಸ್ವಚ್ಛಂದ ಭಾವದಿ ಶ್ಲೋಕಗಳ ಧಾರೆಧಾರೆ ಉದಿಸಿತೊಂದು ಕಾವ್ಯ ಹರಡಿತು ಜಗಕೆಲ್ಲಾ. ಸತಿ-ಪತಿಯ ಆದರ್ಶ ರಾಮನ ಆಯನವಂತೆ ರಮಣೀಯ ಕಥೆಯಂತೆ ಸೋದರಪ್ರೇಮ ಸೂರೆಯಂತೆ ಮರ್ಯಾದ ಪುರುಷೋತ್ತಮನಂತೆ ಪಿತೃವಾಕ್ಯ ಪರಿಪಾಲಕನಂತೆ ಯುಗಯುಗಗಳಿಗೂ ಮಾದರಿಯಂತೆ *ಚಂದ್ರೇಗೌಡ ನಾರಮ್ನಳ್ಳಿ* -- ----------- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ - http://karnatakaeducation.org.in/KOER/en/index.php/Portal:ICT_Literacy 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software ----------- --- You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. To unsubscribe from this group and stop receiving emails from it, send an email to [email protected]. To post to this group, send an email to [email protected]. For more options, visit https://groups.google.com/d/optout.
