*🌻ಮಹರ್ಷಿ ಭಗೀರಥ ಚರಿತ್ರೆ🌻* *ಕೋಶಲ ದೇಶ ಎಂಬುದು ಒಂದು ರಾಜ್ಯ. ಅಯೋಧ್ಯಾ ಅದರ ರಾಜಧಾನಿ, ಸಗರ ಚಕ್ರವರ್ತಿಯು ಅಲ್ಲಿ ರಾಜ್ಯಭಾರ ಮಾಡುತ್ತಿದ್ದನು. ಸಗರ ಚಕ್ರವರ್ತಿಗೆ ಒಬ್ಬರು ಹೆಂಡಂದಿರು. ವಿಧರ್ಬರಾಜನ ಮಗಳು ಕೇಶಿನಿ ಮೊದಲನೇ ಹೆಂಡತಿ, ಅರಿಷ್ಟನೇಮಿ ಎಂಬ ರಾಜನ ಮಗಳು ಸುಮತಿ ಎರಡನೇ ಹೆಂಡತಿ, ಸಗರ ಚಕ್ರವರ್ತಿಯು ತುಂಬಾ ಒಳ್ಳೆಯ ದೊರೆ, ಶಕ್ತಿವಂತನು ಹಾಗೂ ಅವರ ಪರಾಕ್ರಮ ಜಗತ್ತಿಗೆ ಹೆಸರಾಗದು. ಸಗರ ಚಕ್ರವರ್ತಿಯು ತೊಂಭತ್ತೊಂಭತ್ತು ಅಶ್ವಮೇಧಯಾಗ ಮಾಡಿ ಪ್ರಸಿದ್ದನಾಗಿದ್ದನು. ಅವನ ರಾಜ್ಯದಲ್ಲಿ ಪ್ರಜೆಗಳೆಲ್ಲ ಅನಂದದಿಂದ ಇದ್ದರು. ಆದರೆ ಇಷ್ಟೆಲ್ಲ ವೈಭವ, ಸುಖ ತುಂಬಿದ್ದರೂ ರಾಜನಿಗೆ ಸಮಾಧಾನ ಇರಲಿಲ್ಲ. ಕಾರಣ ಅವನಿಗೆ ಮಕ್ಕಳೇ ಇರಲಿಲ್ಲ. ಇದೇ ಚಿಂತೆ ಕೊನೆಗೆ ಜೀವನದಲ್ಲೆ ಬೇಸತ್ತು ರಾಜ್ಯಾಡಳಿತವನ್ನೆಲ್ಲಾ ಮಂತ್ರಿಗಳಿಗೆ ವಹಿಸಿಕೊಟ್ಟು ತನ್ನ ಹೆಂಡತಿಯರೊಡನೆ ಹಿಮಾಲಯಕ್ಕೆ ಹೊರಟು ಹೋದ. ಹೋಗುತ್ತಿರುವಾಗ ಒಂದು ಸುಂದರವಾದ ಸ್ಥಳ ಸಿಕ್ಕಿತ್ತು. ಅದರ ಹೆಸರು “ “ಭೃಗುಪ್ರಸವಣ” ಎಂದು ಅದರ ಸೌಂದರ್ಯಕ್ಕೆ ಮನಸೋತು ಅಲ್ಲೇ ನಿಂತರು. ಆಶ್ರಮವೊಂದನ್ನು ಕಟ್ಟಿಕೊಂಡರು. ಮಕ್ಕಳನ್ನು ಪಡೆಯುವ ಹಂಬಲವಿಟ್ಟುಕೊಂಡು ಸಗರ ಚಕ್ರವರ್ತಿ ಅತೀ ಕಠಿಣವಾದ ತಪಸ್ಸಿನಲ್ಲಿ ಮಗ್ನನಾದನು. ಸಮಯ ಕಳೆದಂತೆ ಅವನ ತಪ್ಪಿಸಿನ ತೀವ್ರತೆ ಹೆಚ್ಚಿತು. ಸಗರನ ಉಗ್ರ ತಪ್ಪಿಸಿಗೆ ಮೆಚ್ಚಿ ಭೃಗು ಖುಷಿಗಳು ಪ್ರತ್ಯಕ್ಷರಾದರು. ಸಗರನು ಅವನ ಪತ್ನಿಯರು ಅವರಿಗೆ ನಮಸ್ಕಾರ ಮಾಡಿ ನಮಗೆ ಮಕ್ಕಳಾಗುವಂತೆ ವರ ನೀಡಿ, ವಂಶ ಮುಂದುವರೆಯುವಂತೆ ಮಾಡಿ ಎಂದು ಬೇಡಿಕೊಂಡರು. ಭೃಗು ಮಹರ್ಷಿಗಳು ಸಂತೃಪ್ತರಾಗಿ ರಾಜಾ ಚಿಂತಿಸಬೇಡಾ ನಿನ್ನ ತಪಸ್ಸಿನಿಂದ ನಿನಗೆ ಮಕ್ಕಳು ಆಗುತ್ತಾರೆ. ನಿನ್ನ ಪತ್ನಿಯರಲ್ಲಿ ಒಬ್ಬಳಿಗೆ ವಂಶೋದ್ಧಾರಕನಾದ ಒಬ್ಬ ಮಗನು, ಇನ್ನೊಬ್ಬಳಿಗೆ ಪರಾಕ್ರಮಶಾಲಿಗಳು ಕೀರ್ತಿ ಪಡೆಯುವವರೂ ಆದ 60 ಸಹಸ್ರ ಮಕ್ಕಳು ಹುಟ್ಟುತ್ತಾರೆ ಎಂದು ವರ ನೀಡಿದರು. ರಾಣಿಯರಿಗೆ ಬಹು ಸಂತೋಷವಾಯಿತು ಜೊತೆಗೆ ಕುತೂಹಲಕಾಡಿತು ಯಾರಿಗೆ ಯಾವ ಮಗು? ಎಂದು ಮಹರ್ಷಿಗಳನ್ನು ಕೇಳಿದರು. ಅವರು ನೀವೆ ಆರಿಸಿಕೊಂಡು ಹೇಳಿ ಎಂದರು ಹಿರಿಯಳಾದ ಕೇಶಿನಿ ವಂಶೋದ್ದಾರನಾದ ಒಬ್ಬ ಮಗ ನನಗೆ ಸಾಕು ಎಂದಳು ಕಿರಿಯ ಹೆಂಡತಿ ಸುಮತಿ ವೀರರು ಕೀರ್ತಿವಂತರು ಆದ ಬಹುಮಂದಿ ಮಕ್ಕಳ ತಾಯಿಯಾಗುವುದೇ ನನ್ನ ಆಸೆ ಎಂದಳು. ಮಹರ್ಷಿಗಳು ನಗು ನಗುತ್ತಾ “ತಥಾಸ್ತು” ಎಂದು ಹೇಳಿ ಅಲ್ಲಿಂದ ತೆರಳಿದರು ಸಗರನು ಆನಂದದಿಂದ ರಾಜಧಾನಿಗೆ ಹಿಂದುರಿಗಿದನು.*
“ *ಸ್ವಲ್ಪ ಕಾಲ ಕಳೆಯಿತು. ಇಬ್ಬರೂ ರಾಣಿಯರು ಗರ್ಭವತಿಯರಾದರು. 9 ತಿಂಗಳಾದೊಡನೆ ಕೇಶನಿಗೊಂದು ಗಂಡು ಮಗು ಆಯಿತು*. *ರಾಜನಿಗೆ ಅಷ್ಟೇ ಅಲ್ಲ ರಾಜ್ಯಕ್ಕೆಲ್ಲಾ ಆನಂದವಾಯಿತು. ರಾಜ ಕುಮಾರನ ಜನನ ಆಯಿತೆಂದು ಬೀದಿ ಬೀದಿಗಳಲ್ಲಿ ಸಂಭ್ರಮದಿಂದ ಉತ್ಸವ ಮಾಡಿದರು. ಮಗನಿಗೆ ಅಸಮಂಜನೆಂದು ಹೆಸರಿಟ್ಟರು. ಅಸಮಂಜನಿಗೆ ಒಬ್ಬ ಮಗನಾದನು ಅವನ ಹೆಸರು ಅಂಶುಮಂತ* *ನಗರ ಮಹಾರಾಜರಿಗೆ ಮತ್ತೊಂದು ಯೋಜನೆ ಬಂತು. ತೊಂಬತ್ತೋಂಭತ್ತು ಅಶ್ವಮೇದಯಾಗ ಮಾಡಿದ್ದಾಗಿದೆ. ಇಷ್ಟೊಂದು ಮಕ್ಕಳ ಬೆಂಬಲದಿಂದ ಇನ್ನೊಂದು ಯಾಗ ಮಾಡಿದರೆ ಇಂದ್ರ ಪದವಿ ದೊರಕುವುದು. ಅದಕ್ಕಾಗಿ 100 ನೇಯ ಅಶ್ವಮೇದಯಾನ ಮಾಡಲು ನಿಶ್ಚಿಸಿದ್ದರು ಅದರ ಪ್ರಕಾರ ಕುದುರೆಯನ್ನು (ಅಶ್ವ) ಪೂಜಿಸಿ ಓಡಾಡಲು ಬಿಟ್ಟರು ಅಶ್ವರಕ್ಷಣೆಗೆ ಮೊಮ್ಮಗ ಅಂಶುಮಂತ ಮತ್ತು 60 ಸಾವಿರ ಮಕ್ಕಳ ಮತ್ತು ಸೈನ್ಯವನ್ನು ಕಳುಹಿಸಿದನು. ಇತ್ತ ಸ್ವರ್ಗದಲ್ಲಿ ದೇವೆಂದ್ರನಿಗೆ (ಇಂದ್ರ) ತನ್ನ ಪದವಿ ಹೋಗುವುದೆಂದು ಭಯ ಹುಟ್ಟಿ ಕಳವಳಿಸಿ ಅದನ್ನು ತಡೆಯಲು ಇಂದ್ರನು ಒಂದು ಉಪಾಯ ಮಾಡಿದನು. ಯಾಗದ ಅಶ್ವ (ಕುದುರೆ)ಯನ್ನು ಪಾತಾಳಲೋಕಕ್ಕೆ ಹೋಗಿ ಕಪಿಲ ಮಹರ್ಷಿಗಳ ಆಶ್ರಮದಲ್ಲಿ ಕಟ್ಟಿ ಹಾಕಿದ. ನಂತರ ಅಂಶುಮಂಥ ಮತ್ತು ಸೈನಿಕರು ಗಾಬರಿಯಾಗಿ ಹುಡುಕಲು ಪ್ರಾರಂಭಿಸಿ ಕೊನೆಗೆ ಸಿಗದ ಕಾರಣ ರಾಜ್ಯಕ್ಕೆ ಬಂದರು. ನಂತರ ಸಗರನು ತನ್ನ ಆರವತ್ತು ಸಾವಿರ ಮಕ್ಕಳಿಗೆ ಆದೇಶವಿತ್ತು* *ಎಲ್ಲದರೂ ಕುದುರೆಯನ್ನು ಹುಡುಕಿ ಕುದುರೆ ಕದ್ದವನನ್ನು ಶಿಕ್ಷಿಸಿ ಕುದುರೆಯನ್ನು ಮರಳಿ ತನ್ನಿ ಎಂದು ಹೇಳಿ ಸೈನ್ಯ ಕೊಟ್ಟು ಕಳುಹಿಸಿದ. ಇವರು ಎಲ್ಲ ಕಡೆಗೆ ಹುಡುಕಿ ನಂತರ ಒಂದು ಚೀಲ ತೆಗೆದು ಪಾತಾಳ ಲೋಕಕ್ಕೆ ಬಂದರು. ಅಲ್ಲಿ ಕಪಿಲ ಋಷಿಮುನಿಗಳು ತಪಸ್ಸನ್ನು ಮಾಡುತ್ತಿದ್ದರು. ಕುದುರೆಯು ಅಲ್ಲಿಯೇ ಮೇಯುತ್ತಿತ್ತು. ಅದನ್ನು ಕಂಡು ಇವನೆ ಕದ್ದಿದ್ದಾನೆ ಎಂದು ಅವರನ್ನು ಶಿಕ್ಷಿಸಲು ಸೈನ್ಯ ಮತ್ತು ಅರವತ್ತು ಸಾವಿರ ಮಕ್ಕಳು ಹೊರಟರು. ಆಗ ಋಷಿಮುನಿಗಳು ತಮ್ಮ ಉಗ್ರವಾದ ಕಣ್ಣುಗಳನ್ನು ಬಿಡಲು ಎಲ್ಲರೂ ಸುಟ್ಟು ಬೂದಿಯಾದರು.* *ಅನೇಕ ದಿನಗಳು ಕಳೆದರೂ ಮಕ್ಕಳು ಮತ್ತು ಸೈನ್ಯವು ಮರಳಿ ಬರಲಿಲ್ಲ. ಎಂಬ ಚಿಂತೆ ಸಗರ ಮಹಾರಾಜನಿಗೆ ಕಾಡಲು ಆಗ ಮೊಮ್ಮಗ ಅಂಶುಮಂತನನ್ನು ಕರೆದು ನಿನ್ನ ಚಿಕ್ಕಪ್ಪರು ಇಲ್ಲ. ಕುದುರೆಯನ್ನು ಹುಡುಕಿಕೊಂಡು ಬಾ ಎಂದು ಹೇಳಿ ಕಳಿಸಿದನು. ಆಗ ಎಲ್ಲ ಕಡೆಗೆ ಹೋಗಿ ಹುಡುಕಾಡಿದರು ಯಾರು ಸಿಗಲಿಲ್ಲ. ಕೊನೆಗೆ ಒಂದು ಚೀಲ ಕಾಣಿಸಿತು.* *ಅದರ ಒಳಗೆ ಹೋಗಿ ನೋಡಿದಾಗ ಅಲ್ಲಿ ಗುಡ್ಡದಷ್ಟು ಎತ್ತರದ ಬೂದಿಯೇ ಬಿದ್ದಿತ್ತು. ಮತ್ತು ಕುದುರೆಯು ಮೇಯುತ್ತಿತ್ತು. ಬಹಳಷ್ಟು ವಿಚಾರ ಮಾಡುತ್ತಿರುವಾಗ ಅಶರೀರ ವಾಣಿಯೊಂದು “ಮಗೂ ಇದು ನಿನ್ನ ಚಿಕ್ಕಪ್ಪಂದಿರ ಬೂದಿಯ ರಾಶಿ ಅವರು ಕಪೀಲ ಋಷಿಗಳ ಕೋಪದಿಂದ ನಾಶವಾಗಿದ್ದಾರೆ” ಎಂದು ಹೇಳಿತು*. *ಇದನ್ನು ಕೇಳಿದ ಅಂಶುಮಂತನಿಗೆ ಅತ್ಯಂತ ದುಃಖವಾಯಿತು. ಸತ್ತವರ ಆತ್ಮಗಳಿಗೆ ಒಳ್ಳೆಯದಾಗಲಿ ಎನ್ನುವುದಕ್ಕಾಗಿ ಸಂಸ್ಕಾರ ಮಾಡಬೇಕೆಂದು ನೀರಿಗಾಗಿ ಅಲ್ಲೆಲ್ಲ ಹುಡುಕಾಡಿದರೂ ನೀರು ಸಿಕ್ಕಲಿಲ್ಲಮುಂದೇನು ಎಂದು ಯೋಚಿಸುತ್ತಿರುವಾಗ ಆಕಾಶದಲ್ಲಿ ಗರುಡ ಕಾಣಿಸಿ “ರಾಜಪುತ್ರ ಚಿಂತಿಸಬೇಡ ನಿನ್ನ ಚಿಕ್ಕಪ್ಪಂದಿರು ಮೃತರಾದರು* *ಲೋಕಹಿತಾರ್ಥವಾಗಿಯೇ, ಋಷಿ ಶಾಪದಿಂದ ಈಗತೀ ಬಂದಿದೆ ಸಾಮಾನ್ಯ ಜಲ ಕ್ರಿಯೆಯಿಂದ ಅವರಿಗೆ ಸದ್ಗತಿ ದೊರಕದು ದೇವಲೋಕದ ಗಂಗೆಯನ್ನು ತಂದು ಈ ಬೂದಿಯು ರಾಶಿಯ ಮೇಲೆ ಹರಿಸಿದಾಗ ಮಾತ್ರ ಅವರಿಗೆ ಸದ್ಗತಿ ಲಭಿಸುವುದು” ಎಂದು ಹೇಳಿತು. ಆಗ ಆಂಶುಮಂತನು ಮೊದಲು ಕುದುರೆಯೊಂದಿಗೆ ಅಯೋಧ್ಯಗೆ ಹಿಂದಿರುಗಿ ತಾತನಿಗೆ ಕುದುರೆ ಒಪ್ಪಿಸಿದನು. *ಸಗರನಿಗೆ ಕುದುರೆ ಕಂಡು ಆನಂದವಾಯಿತಾದರೂ ತನ್ನ ಪರಾಕ್ರಮಿ ಮಕ್ಕಳೆಲ್ಲರೂ ಒಟ್ಟಿಗೆ ಮೃತರಾದುದ್ದನ್ನು ತಿಳಿದು ಅತ್ಯಂತ ದುಃಖವಾಯಿತು. ಆದರೂ ತನ್ನ ದುಃಖ ತಡೆಹಿಡಿದು ಅಶ್ವಯಾಗ ಪೂರೈಸಿದನು* *ಕೊನೆಗೆ ಹತಾಶನಾಗಿ* *ರಾಜ್ಯವನ್ನು ಮೊಮ್ಮಗ" ಅಂಶುಮಂತನಿಗೆ ಒಪ್ಪಿಸಿ “ನಿನ್ನ ಚಿಕ್ಕಪ್ಪಂದರಿಗೆ ನೀನೇ ಸದ್ಗತಿ ಒದಗಿಸುವ ಕೆಲಸವನ್ನು ಮಾಡು” ಎಂದು ಹೇಳಿ ತಪಸ್ಸಿಗಾಗಿ ಕಾಡಿಗೆ ತೆರಳಿದನು* *ಅಂಶುಮಂತ ದೇವಗಂಗೆ ತರುವುದು ಹೇಗೆ ಎಂದು ತಿಳಿಯಲಿಲ್ಲ. ಕೆಲ ಸಮಯದ ನಂತರ ತನ್ನ ಮಗನಾದ ದಿಲೀಪನಿಗೆ ರಾಜ್ಯವನ್ನು ತರುವುದು ಹೇಗೆ ಹೊಣೆಯನ್ನು ಒಪ್ಪಿಸಿದನು. ದಿಲೀಪನು ಸಹ ಗಂಗೆಯನ್ನು ತರುವುದು ಹೇಗೆ ಎಂದು ಯೋಚಿಸುತ್ತಿದ್ದನು. ಅವನೂ ಗಂಗೆಯನ್ನು ತರಲಾಗಲಿಲ್ಲವಲ್ಲ. ತಾತಂದಿರಿಗೆ ಸದ್ಗತಿ ಕಾಣಿಸಲಿಲ್ಲವಲ್ಲ ಎಂಬ ಚಿಂತೆಯಿಂದಲೇ ಸ್ವರ್ಗಸ್ಥನಾದನು. ಈ ವಿಷಯವನ್ನು ದಿಲೀಪನ ಮಗ ಭಗೀರಥ ತನ್ನ ತಾಯಿಯಿಂದ ಕೆಳಿ ತಿಳಿದು ತನ್ನ ಪೂರ್ವಜರಿಗೆ ಸದ್ಗತಿ ಕೊಡಿಸುವ ಕೆಲಸವನ್ನು ತಾನು ಸಾಧಿಸಬೇಕೆಂದು ಛಲತೊಟ್ಟು ತನ್ನ ತಾಯಿಗೆ ನಮಸ್ಕರಿಸಿ ತಪಸ್ಸಿಗೆಂದು ಹಿಮಾಲಯ ಪರ್ವತಕ್ಕೆ ಬಂದು ಪದ್ಮಾಸನದಲ್ಲಿ ಕುಳಿತು ತಪಸ್ಸು ಮಾಡುತ್ತಿದ್ದನು. ಅವರು ಬಿಡುವ ಪ್ರತಿ ಉಸಿರು ಗಂಗೆ ಧರೆಗೆ ಬರಲಿ ಎನ್ನುತ್ತಿತ್ತು. ನಂತರ ಚಳಿಗಾಲದಲ್ಲಿ ಎದೆ ಎತ್ತರದ ನೀರಿನಲ್ಲಿ ಏಕಾಗ್ರತೆಯಿಂದ ತಪಸ್ಸು ಮಾಡಲಾರಂಭಿಸಿದರು. ಬೇಸಿಗೆ ಕಾಲದಲ್ಲಿ ಪಂಚಾಗ್ನಿ ಪ್ರಾರಂಭಿಸಿದರು. ಪಂಚಾಗ್ನಿ ತಪಸ್ಸೆಂದರೆ(ಸುತ್ತಲೂ ಧಗಧಗಿಸುವ ಬೆಂಕಿ ಮೇಲೆ ಉರಿಯುವ ಸೂರ್ಯ ಬೆಂಕಿಯ ಮಧ್ಯನಿಂತು ಕಣ್ಣು ಬಿಟ್ಟು ಸೂರ್ಯನನ್ನು ನೋಡುವುದು). ಇದಕ್ಕೆ ತಪೋಜ್ವಾಲೆ ಎನ್ನುತ್ತಾರೆ. ಇದು ಅತೀ ಉಗ್ರವಾಯಿತು. ಇದನ್ನು ನೋಡುವವರ ಕಣ್ಣಿಗೆ ಸೂರ್ಯನಂತೆ ತೇಜಸ್ವಿಯಾಗಿ ಕಾಣುತ್ತಿದ್ದರೂ ಭಗೀರಥನ ತಪೋಜ್ವಾಲೆಯನ್ನು ತಡೆಯಲಾರದೆ ದೇವತೆಗಳು ಬ್ರಹ್ಮದೇವನಲ್ಲಿಗೆ ಬಂದು “ದೇವಾ ಭಗೀರಥನ ತಪಸ್ವಿನ ಜ್ವಾಲೆ ಸಹಿಸಲು ಸಾಧ್ಯವಾಗುತ್ತಿಲ್ಲ. ಅದರಿಂದ ನಮ್ಮನ್ನು ರಕ್ಷಿಸಿಬೇಕು.” ಎಂದು ಕೇಳಿಕೊಂಡರು ಬ್ರಹ್ಮನು ಎಲ್ಲರಿಗೂ ಸಮಾಧಾನ ಮಾಡಿ ಕಳುಹಿಸಿದನು.* *ಭಗೀರಥನು ತಪಸ್ಸಿಗೆ ಮೆಚ್ಚಿ ಬ್ರಹ್ಮ ಪ್ರತ್ಯಕ್ಷನಾಗಿ “ ನಿನಗೇನು ಬೇಕು” ಎಂದು ಕೇಳಿದನು. ಆಗ ಭಗೀರಥ ತನ್ನ ಪೂರ್ವರಿಗೆ ಸದ್ಗತಿ ದೊರೆಯಬೇಕೆಂದರೆ “ಅವರೆಲ್ಲರನ್ನು ಉದ್ದರಿಸಲು ದೇವಗಂಗೆಯನ್ನು ಕಳುಸಿಕೊಡಬೇಕು” ಎಂದು ಬೇಡಿಕೊಂಡನು. ಆಗ ಬ್ರಹ್ಮ “ ನಾನಂತು ಗಂಗೆಯನ್ನು ಕಳಿಸಿಕೊಡುತ್ತೇನೆ ಆದರೆ ಸ್ವರ್ಗದಿಂದ ಅವಳು ಭೂಮಿಗೆ ಇಳಿಯುವಾಗ ಅವಳ ಪ್ರವಾಹದ ರಬಸಕ್ಕೆ ಭೂಮಂಡಲವೇ ನಾಶವಾಗುತ್ತದೆ. ಅವಳ ರಭಸವನ್ನು ತಡೆಯಲು ಈಶ್ವರನಿಗೆ ಮಾತ್ರ ಸಾಧ್ಯ” ಎಂದಾಗ ಈಶ್ವರನನ್ನು ಕುರಿತು ಭಗೀರಥನು ಉಗ್ರ ತಪಸ್ಸು ಪ್ರಾರಂಭಿಸಿದನು. ಎರಡು ಕೈಗಳನ್ನು ಮೇಲಕ್ಕೆತ್ತಿ ಒಂದೇ ಕಾಲಿನಲ್ಲಿ ನಿಂತು ಏಕಾಗ್ರ ಚಿತ್ತನಾಗಿ ಸಾವಿರ ವರ್ಷ ತಪಸ್ಸನು ಮಾಡಿದನು. ಆಗ ಈಶ್ವರನು ಪ್ರತ್ಯಕ್ಷನಾಗಿ “ಭಕ್ತನೇ ನಿನಗೇನಾಗಬೇಕಾಗಿದೆ ಏಕೆ ನನ್ನನ್ನು ಧ್ಯಾನಿಸಿದೆ”. ಎಂದಾಗ ಭಗೀರಥನು, “ಬ್ರಹ್ಮನು ದೇವಗಂಗೆಯನ್ನು ಕಳುಹಿಸಲು ಒಪ್ಪದ್ದಾನೆ. ಆದರೆ ಗಂಗೆಯ ರಭಸವನ್ನು ನೀನು ಭರಿಸಬೇಕು” ಎಂದು ಬೇಡಿಕೊಂಡನು. ಆಗ ಈಶ್ವರನು “ ಆಗಲಿ ಗಂಗೆಯ ಪ್ರವಾಹವನ್ನು ನಾನು ತಲೆಯಲ್ಲಿ ಭರಿಸುವೆ” ಎಂದು ಹೇಳಿ ಮಹಾಶಿಖರವೂಂದು ಏರಿ ನಿಂತನು. ನಂತರ ಬ್ರಹ್ಮ ದೇವನ ಆಜ್ಞೆಯಂತೆ ಗಂಗೆಯು ಈಶ್ವರ (ಶಿವ) ನ ಜೊತೆಯಲ್ಲಿ ಧುಮಕಿದಳು. ಆರ್ಭಟದಿಂದ ಬೀಳುತ್ತಿದ್ದ ಗಂಗೆಯನ್ನು ಬಿರುಗೂದಲು ನಡುವೆ ಜಾರಿ ಹೋಗದಂತೆ ಬಲವಾಗಿ ಈಶ್ವರನು ಕಟ್ಟಿಹಾಕಿದನು. ನಂತರ ವಿನಯವಾಗಿ ಈಶ್ವರನ್ನು ಬೇಡಿಕೊಳ್ಳಲು “ ಇದೂ ಗಂಗೆಯನ್ನು ನನ್ನ ಜಟೆಯಿಂದ ಬಿಡುಗಡೆ ಮಾಡುತ್ತೇನೆ. ಆದರೆ ಪ್ರವಾಹದಲ್ಲಿ ಬಿಡಲಾರೆ ಅದರಿಂದ ನಿನಗೆ ತೊಂದರೆ ಅದಕ್ಕಾಗಿ 7 ಭಾಗಗಳಲ್ಲಿ ಬಿಡುಗಡೆ ಮಾಡುವೆ 3 ಭಾಗ ಪಶ್ಚಿಮಕ್ಕೆ 3 ಭಾಗ ಪೂರ್ವಕ್ಕೆ ಹೋಗಲಿ ಒಂದು ಭಾಗ ಮಾತ್ರ ನಿನ್ನ ಹಿಂದೆ ಬರಲಿ” ಎಂದು ಹೇಳಿ ಬಿಡುಗಡೆ ಮಾಡಿದನು ಭಗೀರಥನು ಪರಮೇಶ್ವರನಿಗೆ ನಮಸ್ಕರಿಸಿ ಗಂಗೆಯನ್ನು ಶ್ರೀ.ಭಗೀರಥನು ಹಿಮಾಲಯದಿಂದ ಕೆಳಗಿಳಿದು ವಿಶಾಲವಾದ ಬಯಲು ಪ್ರದೇಶಕ್ಕೆ ಬಂದನು ಅವನ ಹಿಂದೆ ಗಂಗೆಯು ನವವಧುವಿನಂತೆ ನಾಚುತ್ತಾ ನಲಿಯುತ್ತಾ ನಿಧಾನವಾಗಿ ಸಾಗಿದಳು. ದಾರಿಯಲ್ಲಿ ಜಹ್ನು ಋಷಿಗಳ ಆಶ್ರಯ ಸಿಕ್ಕಿತು. ಅದು ಬಹಳ ಸುಂದರವಾಗಿತ್ತು. ಶ್ರೀ ಭಗೀರಥನಿಗೆ ಈ ಮಹರ್ಷಿಗಳ ಪರಿಚಯ ಅವರಿಗಿತ್ತು ಅದಕ್ಕೆ ಅವರಿಗೆ ನಮಸ್ಕರಿಸಿ ಹೋಗೊಣವೆಂದು ಒಳಗೆ ಹೋದರು. ಅವರ ಹಿಂದೆಯೇ ದೇವಗಂಗೆಯೂ ಕೊಡಾ ಚೇಷ್ಠ ಮಾಡೋಣವೆಂದು ಆಶ್ರಮದ ತುಂಬೆಲ್ಲ *ಓಡಾಡಿದಳು. ಆಶ್ರಮದ ತುಂಬಾ ನೀರೆ ನೀರು, ಅದನ್ನು ಅರಿತ ಮಹರ್ಷಿಗಳು ಅವಳಿಗೆ ಬುದ್ಧಿ ಕಲಿಸಬೇಕೆಂದುಕೊಂಡು ತಮ್ಮ ಕೈಯೊಳಗೆ ಆಕರ್ಷಿಸಿ* *ಒಂದೇ ಬಾರಿಗೆ ಅಪೋಶನದಂತೆ ಕುಡಿದು ಬಿಟ್ಟರು* *ಶ್ರೀ ಭಗೀರಥನು ಗಂಗೆಯನ್ನು ನೋಡುತ್ತಾನೆ.ಅವಳು ಎಲ್ಲಿಯೂ ಕಾಣುತ್ತಿಲ್ಲ.ಆಗ ಋಷಿಮುನಿಗಳನ್ನು ಕೇಳುತ್ತಾನೆ* *ಆಗ ಗಂಗೆಯು ಚೇಷ್ಠಗೆ ತಕ್ಕ ಶಿಕ್ಷೆ* *ವಿಧಿಸಬೇಕೆಂದು ನಾನೇ ಅವಳನ್ನು ಅಪೋಶನವಾಗಿ ಸ್ವೀಕರಿಸಿದ್ದೆನೆ* *ಎಂದು ನನ್ನ ಜೊತೆಗೆ ಕಳುಹಿಸಿಕೊಡಬೇಕೆಂದು ಕಳಕಳಿಯಿಂದ ಬೇಡಿಕೊಂಡಾಗ ಋಷಿಗಳು ಗಂಗೆಯನ್ನು ತಮ್ಮ ಕಿವಿಯಿಂದ ಹೊರಬಿಟ್ಟರು*. *ಶ್ರೀ ಭಗೀರಥನು ಪಾತಾಳವನ್ನು ಸೇರಿ ಅಲ್ಲಿದ್ದ ಬೂದಿಯ ರಾಶಿಯ ಬಳಿ ನಿಂತು “ತಾಯೇ ನನ್ನ ಪೂರ್ವಿಕರ ಬೂದಿಯ ರಾಶಿ ಇಲ್ಲದೆ ದಯಮಾಡಿ ಇದರ ಮೇಲೆ ಪ್ರವಹಿಸಿ ಇವರ ಆತ್ಮಗಳಿಗೆ ಮೋಕ್ಷಕೊಡು” ಎಂದು ಬೇಡಿಕೊಂಡಾಗ ಗಂಗೆಯು ನೇರವಾಗಿ ಬೂದಿಯರಾಶಿಯ ಮೇಲೆ ನುಗ್ಗದಳು ಆಗ ಸಗರನ ಆರವತ್ತು ಸಹಸ್ರ ಆತ್ಮಗಳು ಶುದ್ಧರಾಗಿ ಪಾಪಮುಕ್ತರಾಗಿ ಸ್ವರ್ಗ ಸೇರಿದರು.* *ಗಂಗೆಯು ಶ್ರೀ ಭಗೀರಥನ ಹಿಂದೆ ಮಗಳಂತೆ ಬಂದುದರಿಂದ ಅವಳನ್ನು ಭಾಗಿರಥೀ ಎಂದರು. ಸ್ವರ್ಗ ಭೂಮಿ ಪಾತಾಳ ಹೀಗೆ ಮೂರು ಲೋಕಗಳೆಲ್ಲ ಹರಿದುದರಿಂದ ತ್ರಿಪಥಕೆ ಎಂದರು. ಜಾಹ್ನು ಋಷಿಯು ಕಿವಿಯಿಂದ ಹೊರಬಂದು ಅವರ ಮಗಳಾದುದರಿಂದ ಜಾಹ್ನವಿ ಎಂದು ನಾನಾ ಹೆಸರುಗಳಿಂದ ಕರೆಯಲ್ಪಟ್ಟಳು ನಂತರ ಗಂಗೆಗೆ ಭಗೀರಥನು ನಮಸ್ಕರಿಸಿ ತನ್ನ ರಾಜಧಾನಿಗೆ ಹಿಂತಿರುಗಿ ತಾಯಿಗೆ ತಪಸ್ಸು ಮಾಡಿ ತನ್ನ ಪೂರ್ವಜರಿಗೆ ಮೊಕ್ಷ ನೀಡಿತನ್ನ ಕುಟುಂಬಕ್ಕೆ ಮತ್ತು ದೇಶಕ್ಕೆ ಕೀರ್ತಿ ತಂದನು . ಅದಕ್ಕಾಗಿ ಪ್ರಯತ್ನಕ್ಕೆ ಇನ್ನೊಂದು ಹೆಸರೇ ಭಗೀರಥ ಪ್ರಯತ್ನ ಎಂಬುದು ಪ್ರಚಲಿತವಾಯಿತು.* ಸಮೀರ ( ಕನ್ನಡ ಭಾಷಾ ಶಿಕ್ಷಕಿ ಸಮೀರ ( ಕನ್ನಡ ಭಾಷಾ ಶಿಕ್ಷಕಿ -- ----------- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ - http://karnatakaeducation.org.in/KOER/en/index.php/Portal:ICT_Literacy 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software ----------- --- You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. To unsubscribe from this group and stop receiving emails from it, send an email to [email protected]. To post to this group, send an email to [email protected]. For more options, visit https://groups.google.com/d/optout.
